ಹೋಮ್ · ಮಾರ್ಗದರ್ಶಿಗಳು · ಲೀಡ್‌ಗಳು ಮತ್ತು ಫಾಲೋ-ಅಪ್‌ಗಳು
ಲೀಡ್‌ಗಳು ಮತ್ತು ಫಾಲೋ-ಅಪ್‌ಗಳು

ಇಂದಿನ ಫಾಲೋ-ಅಪ್‌ಗಳನ್ನು ಮುಗಿಸಿ

ಯಾರಿಗೆ ಕಾಲ್ ಮಾಡಬೇಕು ಎಂಬ ಒಂದೇ ಪಟ್ಟಿ: ಮೊದಲು ತಡವಾದವು, ನಂತರ ಇಂದಿನವು, ನಂತರ ಈ ವಾರದವು.

ಹಂತಗಳು

  1. Leads ಮೆನುವಿನಲ್ಲಿ Follow-ups ತೆರೆಯಿರಿ, ಅಥವಾ Follow-ups ಬಟನ್ (Leads ನಲ್ಲಿ). ಗುಂಪುಗಳು: Waiting for your reply, Overdue, Due today, Next 7 days, No follow-up set.
  2. ಸಾಲಿನಲ್ಲಿರುವ Call ಅಥವಾ WhatsApp ಬಟನ್ ಬಳಸಿ. ಅವು ನಿಮ್ಮ ಸ್ವಂತ ಫೋನ್ ಮತ್ತು ನಿಮ್ಮ ಸ್ವಂತ WhatsApp ತೆರೆಯುತ್ತವೆ.
  3. ಕಾಲ್ ಆದ ಮೇಲೆ Log call outcome ತೆರೆಯಿರಿ, What happened ಮತ್ತು ಯಾವಾಗ Follow up ಎಂದು ಆರಿಸಿ, ನೋಟ್ ಸೇರಿಸಿ, ನಂತರ Save.
  4. ಲೀಡ್ ತನ್ನ ಹೊಸ ದಿನಾಂಕಕ್ಕೆ ಹೋಗುತ್ತದೆ. Won ಮತ್ತು Lost ಲೀಡ್‌ಗಳು ಇಲ್ಲಿ ಎಂದಿಗೂ ಕಾಣುವುದಿಲ್ಲ.

ತಿಳಿದಿರಲಿ

ಫಾಲೋ-ಅಪ್ ಆರಿಸದಿದ್ದರೆ ಫಲಿತಾಂಶವೇ ಆರಿಸುತ್ತದೆ: Connected ಆದರೆ 3 ದಿನದಲ್ಲಿ, No answer ಅಥವಾ Busy ಆದರೆ ನಾಳೆ.
Not interested ಮತ್ತು Wrong number ದಿನಾಂಕ ತೆಗೆಯುತ್ತವೆ, ಆದರೆ ಲೀಡ್ ಮುಚ್ಚುವುದಿಲ್ಲ. ಅದನ್ನು ತೆರೆದು Lost ಮಾಡಿ, ಇಲ್ಲದಿದ್ದರೆ ಅದು No follow-up set ಅಡಿಯಲ್ಲೇ ಉಳಿಯುತ್ತದೆ.
WhatsApp ಗ್ರೂಪ್, ಅಥವಾ WhatsApp ನಂಬರ್ ಮರೆಮಾಡಿದ ವ್ಯಕ್ತಿಗೆ ಫೋನ್ ನಂಬರ್ ಇಲ್ಲ, ಹಾಗಾಗಿ ಅವರ Call ಮತ್ತು WhatsApp ಬಟನ್‌ಗಳು ಬೂದು ಬಣ್ಣದಲ್ಲಿರುತ್ತವೆ. ನಿಮ್ಮ WhatsApp ಆ್ಯಪ್‌ನಿಂದ ಅವರಿಗೆ ಉತ್ತರಿಸಿ.

Waiting for your reply ನಲ್ಲಿ, ಕೊನೆಯ WhatsApp, Messenger ಅಥವಾ Instagram ಮೆಸೇಜ್ (ಅಥವಾ ಕಮೆಂಟ್) ಗ್ರಾಹಕರಿಂದ ಬಂದಿದ್ದು, ನಿಮ್ಮ ಟೀಮ್‌ನಲ್ಲಿ ಯಾರೂ ಉತ್ತರಿಸದ ಲೀಡ್‌ಗಳು ಕಾಣುತ್ತವೆ. ಆಟೋಮ್ಯಾಟಿಕ್ ಮೆಸೇಜ್‌ಗಳನ್ನು ಉತ್ತರ ಎಂದು ಎಣಿಸುವುದಿಲ್ಲ. ಗ್ರಾಹಕರು ಮತ್ತೆ ಬರೆದಾಗ, ಆ ಲೀಡ್ ನೋಡಿಕೊಳ್ಳುವವರಿಗೆ ಬೆಲ್ ಅಲರ್ಟ್ ಬರುತ್ತದೆ. ನಿಮ್ಮ ಫೋನ್‌ನ WhatsApp Business ಆ್ಯಪ್‌ನಲ್ಲಿ ನೀವು ಟೈಪ್ ಮಾಡುವ ಉತ್ತರಗಳು ಇನ್ನೂ ಇಲ್ಲಿ ಕಾಣುವುದಿಲ್ಲ.

ಈ ವಿಭಾಗದಲ್ಲಿ ಮುಂದಿನದುಗ್ರಾಹಕರು ಕಾಯುತ್ತಿರುವಾಗ ತಕ್ಷಣ ತಿಳಿಯಿರಿ

ಈ ವಿಭಾಗದಲ್ಲಿ ಇನ್ನಷ್ಟು

Saathi360 ನಲ್ಲಿ ಪ್ರಯತ್ನಿಸಿ

30 ದಿನ ಉಚಿತ ಟ್ರಯಲ್, ಎಲ್ಲಾ ಸೌಲಭ್ಯ, ಕಾರ್ಡ್ ಬೇಡ.

ಉಚಿತ ಟ್ರಯಲ್ ಶುರುಮಾಡಿ ಡೆಮೊ ಬುಕ್ ಮಾಡಿ